Pages

Sunday, April 19, 2009

’ಆರೇಂಜ್ ಕೌಂಟಿ ’ಯಲ್ಲಿ ನಮ್ಮ ಪ್ರವಾಸದ ಕೊನೆಯದಿನಗಳನ್ನು ಕಳೆದ ಸುಂದರ ನೆನೆಪುಗಳು !

’ ಅವೆನ್ಯೂ ಆಫ್ ಆರ್ಟ್ಸ್ ’ ರಂಗಮಂದಿರಗಳ ಬಳಿ ಕಾರ್ ಪಾರ್ಕಿಂಗ್ ಗಾಗಿಯೇ ೫ ಮಡಿಯ ಕಟ್ಟಡಗಳನ್ನು ನಿರ್ಮಿಸಿದ್ದಾರೆ.
’ ಫಾಲಿಂಗ್ ಥಿಯೇಟರ್ ಸೆಂಟರ್ ’
೨೪ ಗಂಟೆಗಳಲ್ಲೂ ಸೇವೆ ಉಪಲಬ್ಧವಿರುವ, " ಸಿ. ವಿ.ಎಸ್. ಫಾರ್ಮಸಿ," ಕಾಸ್ಟಾಮೆಸದಲ್ಲಿ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿದೆ. ಇದರ ಶಾಖೆಗಳನ್ನು ( ಪ್ರಮುಖಶಾಖೆಯೆಲ್ಲಿದೆ ಗೊತ್ತಿಲ್ಲ ) ನಾವು, ಚಿಕಾಗೋ, ಸ್ಯಾನ್ ಫ್ರಾನ್ಸಿಸ್ಕೋ, ಬ್ಲೂಮಿಂಗ್ಟನ್, ಕೊಲಂಬಿಯಗಳಲ್ಲಿ ನೋಡಿದೆವು. ವಿಚಿತ್ರವೆಂದರೆ, ಅಮೆರಿಕನ್ನರಿಗೆ ಡಾಕ್ಟರ್ ಸೇವೆ ಸಿಗುವುದು ತೀರಾ ದುಬಾರಿವಿಶಯವೆಂದು ನಮಗೆ ತಿಳಿದವರೆಲ್ಲಾ ಹೇಳಿದರು. ತಾವೇ ಓದಿಕೊಂಡು ಮಾತ್ರೆಗಳನ್ನು ನುಂಗುತ್ತಾರಂತೆ. ಮೆಡಿಕಲ್ ಇನ್ಷೂರೆನ್ಸ್ ಇಲ್ಲದಿದ್ದರೆ ದೇವರೇ ಗತಿ. ಅದರಿಂದ ಹಲವಾರು ಭಾರತೀಯರು ಅವರ ತಂದೆತಾಯಿಯರನ್ನು ಕರೆಸಿಕೊಳ್ಳಲು ಹಿಂಜರಿಯುತ್ತಾರೆ. ಇಂತಹ "ಫಾರ್ಮಸಿ ಸ್ಟೋರ್,’ ಗಳಲ್ಲಿ ಹೋಗಿ ತಮಗೆ ಬೇಕಾದ ಔಷಧಿ ಸಾಮಗ್ರಿಗಳನ್ನು ಕೊಂಡು ತರುತ್ತಾರೆ. ಅಲ್ಲೇ ಒಬ್ಬ ಡಾಕ್ಟರನ್ನು ನಿಯುಕ್ತಿಮಾಡಿರುತ್ತಾರೆ. ಆತ ಅಲ್ಲಿನ ಔಷಧಿಗಳ ಗುಣಮಟ್ಟ ಹಾಗೂ ಅದರ ಉಪಯುಕ್ತತೆಯಬಗ್ಗೆ ನಮಗೆ ತಿಳಿಯಹೇಳುತ್ತಾನೆ. ಅದನ್ನೇ ಮಾನದಂಡಮಾಡಿಕೊಂಡು ನಾವು ಅಲ್ಲಿ ಸಿಗುವ ’ಡ್ರಗ್ಸ್ ’ ಖರೀದಿಸಬೇಕಷ್ಟೆ ! ನಮಗೆ ಗುಜರಾಥಿ ಭಾರತೀಯ ವೈದ್ಯರೊಬ್ಬರು ಸಿಕ್ಕಿದ್ದರು. ಅವರು ಹೇಳಿದಂತೆ ನಮಗೆ ಬೇಕಾಗಿದ್ದ ಮೊಣಕಾಲು ಪಟ್ಟಿ, ಕೈಪಟ್ಟಿ, ಸೊಂಟದ ಪಟ್ಟಿ, ಹಾಗೂ ಮೊಣಕೈ ಪಟ್ಟಿ, ಹಾಗೂ ಕೆಲವು ಮುಲಾಮುಗಳನ್ನು, ಮತ್ತು ಮಾತ್ರೆಗಳನ್ನು ಕೊಂಡೆವು..


’ಫೋಲಿಂಗ್ ಥಿಯೇಟರ್ ಸೆಂಟರ್, ’ಒಂದು ವಿಶಾಲವಾದ ಸುಸಜ್ಜಿತ ರಂಗಮಂದಿರ !


ಅಂದವಾದ ಗಿಡಗಳನ್ನು ಹದವಾಗಿ ಕತ್ತರಿಸಿ ಮಾಡಿದ ಸುಂದರ ವಿನ್ಯಾಸ....


’ ಸ್ಯಾಮ್ಯುಲ್ ಥಿಯೇಟರ್ ’ ಸಾಮಾನ್ಯದಿನಗಳಲ್ಲಿ ಈ ತಾಣ ಯಾವ ಹೆಚ್ಚಿನ ಗದ್ದಲ ಅಥವಾ ಗಲಾಟೆಗಳಿಲ್ಲದೆ, ಶಾಂತವಾಗಿರುತ್ತದೆ. ಆದರೆ ವಾರದ ಕೊನೆಯಲ್ಲಿ, ಮತ್ತು ಅಮೆರಿಕನ್ ಹಬ್ಬಗಳದಿನ, ಇಲ್ಲಿ ದೊಡ್ಡ ಜಾತ್ರೆಯಷ್ಟು ಜನರಿರುತ್ತಾರೆ. ಆದರೆ ನಮ್ಮ ಪಟ್ಟಣಗಳಂತೆ, ಅವ್ಯವಸ್ಥತೆ, ಅಧವಾ ಸ್ಟ್ಯಾಂಪೇಡ್ ಇಲ್ಲಿ ಯಾರಿಗೂ ಗೊತ್ತಿಲ್ಲ !


ಕಲಾರಂಗಭವನದ ಮುಂದಿನ ಕಟ್ಟೆಯಮೇಲೆ ....


ಕಲಾಮಂದಿರದ ಮೇಲ್ಛಾವಣಿಯ ಸುಂದರ ವಿನ್ಯಾಸವನ್ನು ಗಮನಿಸಿ...


ಸುಂದರ ಕಟ್ಟಡಗಳ ಸಮೂಹ....


ವೈರ್ ನಲ್ಲಿ ರಚಿಸಿದ ಸುಂದರ ವಿನ್ಯಾಸ...


ಹತ್ತಿರದಲ್ಲಿ ನೋಡಿದಾಗ...


ರಂಗಮಂದಿರದ ಪ್ರಮುಖ ದ್ವಾರದ ಮನಮೋಹಕ ವಿನ್ಯಾಸ...


ಸಂಪೂರ್ಣ ಗಾಜಿನಿಂದ ವಿನ್ಯಾಸಮಾಡಿದ ಕಾನ್ಸರ್ಟ್ ಹಾಲ್....


’ ಎಸ್. ಸಿ. ಆರ್. ’ ಗೆ ಹೋಗಲು ದಾರಿಸೂಚಿಸುವ ಸುಂದರ ವಿನ್ಯಾಸ....


ಮತ್ತೊಂದ ಕೋನದಿಂದ ವೀಕ್ಷಿಸಿದಾಗ ಕಾಣುವ ರೀತಿ...

ಆಫೀಸ್ ಕಟ್ಟಡಗಳು..


ಸುಂದರ ಟ್ಯುಲಿಪ್ ಗಳು...


ಬಹುಮಹಡಿ ಗಾಜಿನ ಕಟ್ಟಡ....


’ ಅವೆನ್ಯೂ ಆಫ್ ಆರ್ಟ್ಸ್ " ನ ಬಳಿಯ ಸುಂದರ 'ರಂಗಮಂದಿರಗಳು'  !


ಅಲ್ಲಿನ ಲಾಂಛನವೇನೋ ಎಂಬಂತೆ ತುಕ್ಕಿನ ಬಣ್ಣದ ಈ ಆಕೃತಿ ಇದೆ...


ಕಲಾಭವನದ ಹೊರಭಾಗದಲ್ಲಿ ನಾನುಕಂಡ ಅಮೆರಿಕನ್ ಮಾದರಿಯ, ಕಲಾಕೃತಿಗಳು...
ಕ್ಯಾಲಿಫೋರ್ನಿಯ, ನಮ್ಮ ಕನಸಿನ ತಾಣದಲ್ಲಿ ಕಳೆದ ಪ್ರತಿಕ್ಷಣಗಳೂ ನಮಗೆ ಮುದನೀಡಿದವು. ’ಕ್ಯಾಲಿಫೋರ್ನಿಯ ಗೋಲ್ಡ್ ರಶ್,” ”ವೈಲ್ಡ್ ವೆಸ್ಟ್ ’ನ ಭಾವನೆಗಳ ಹಲವಾರು ಅನಿಸಿಕೆಗಳನ್ನು ’ ಅತಿ-ವೇಗದ ಇಂಟರ್ನೆಟ್ ’ ನಲ್ಲಿ ಓದಲು ಅನುಕೂಲವಾಗಿತ್ತು. ನಾವಿನ್ನೂ ’ಕಾಸ್ಟಾಮೆಸ ’ನಗರದಲ್ಲಿದ್ದಾಗಲೇ ಒಂದು "ಜಬರ್ದಸ್ ಭೂಕಂಪ " ವನ್ನು ಅನುಭವಿಸಿದೆವು. ಭೂಕಂಪಗಳು ಕ್ಯಾಲಿಫೋರ್ನಿಯದ ಬೆನ್ನಿಗೆ ಅಂಟಿಕೊಂಡು ಬಂದಿವೆ ಎನ್ನುವ ಮಾತುಗಳನ್ನು ಓದಿದ್ದೆವು, ಕೇಳಿದ್ದೆವು. ಆದರೆ ಅದನ್ನು ನಾವೇ ಅನುಭವಿಸಿದ್ದು, ಒಂದ ಅವರ್ಣನೀಯ ಹಾಗೂ ಅಸಾಧಾರಣ ಅನುಭವ....!

ಅಲ್ಲಿನ ವಿಜ್ಞಾನಿಗಳು, ತಂತ್ರಜ್ಞರುಗಳು, ಭೂಕಂಪಕ್ಕೆ ಹೆದರುವುದಿಲ್ಲ. ಅದರಬದಲು, ಭೂಕಂಪಗಳನ್ನು ತಡೆಯುವ ಹಾಗೂ ಹಾನಿಗಳನ್ನು ನಿವಾರಿಸಲು, ಅಥವಾ ಹಾನಿಯನ್ನು ಕಡಿಮೆಮಾಡಲು ಪಡುತ್ತಿರುವಶ್ರಮ, ನಿಜಕ್ಕೂ ಅನುಕರಣೀಯ. ಅಲ್ಲಿನ ಜನರೇ ಹಾಗೆ. ಒಂದು ಆಘಾತ ಅಥವಾ ಒಂದು ದುರದೃಷ್ಟ-ಘಟನೆ, ಸಂಭವಿಸಿದಾಗ, ಅದನ್ನು ಮತ್ತೆ ಮರುಕಳಿಸದಂತೆ ಹೇಗೆ ಪರಿಸ್ತಿತಿಯನ್ನು ನಿಯಂತ್ರಿಸಬಹುದು, ಮತ್ತು ನ್ಯೂನಗೆಗಳನ್ನು ತಪ್ಪಿಸಿ ಸುಧಾರಿಸುವುದು ಹೇಗೆ, ಎನ್ನುವುದನ್ನು ಕಂಡುಹಿಡಿಯಲು ದಿನ-ರಾತ್ರಿ ಶ್ರಮಿಸಿತ್ತಾರೆ. ದೇವರನ್ನು ಬಿಟ್ಟರೆ ನಮ್ಮಂತಹ ಹುಲುಮಾನವರ ಕೈಲಿ ಸಾಧ್ಯವೇ ಎಂದು ಕೈಕಟ್ಟಿಕೊಂಡು ಕೂಡೃವರು ನಾವೇ ! ಆದರೆ, ಅಮೆರಿಕನ್ನರು ಹಾಗಲ್ಲ. ಅವರು, ಖಂಡಿತ ದೇವರ ಮೊರೆಯಂತೂ ಹೋಗುವುದಿಲ್ಲ. ದೇವರಮೇಲೆ ಎಲ್ಲಾ ಭಾರವನ್ನು ಬಿಡುವವರು ನಾವೇ -ಭಾರತೀಯರು ! ಇದೊಂದು, ಎಲ್ಲರೂ ಕಲಿಯಬೇಕಾದ ಪಾಠ ! ಹಾಗಂದ ಮಾತ್ರಕ್ಕೇ ಅಮೆರಿಕನ್ನರು ಮಾಡುವುದೆಲ್ಲಾ ಅನುಕರಣೀಯವೆಂದು ನಾನೆಲ್ಲಿ ಹೇಳಿದೆ ?


ನಾವಿದ್ದ ಕಾಲೋನಿಯ ಪರಿಸರದಲ್ಲಿ ಒಂದು ಕೃತಕ ಕಾಡನ್ನೇ ಸೊಗಸಾಗಿ ನಿರ್ಮಿಸಿದ್ದಾರೆ....


ಕಾಡು, ವನ, ನೀರು, ಬಂಡೆಗಳು, ಹುಲ್ಲು, ಹಸಿರು ಹೊನ್ನು ಎಲ್ಲವೂ ನಿಚ್ಚಳ, ಜನರೂ, ಹಾಗೂ ನಿಸರ್ಗ ಎರಡೂ ಎಡೆಬಿಡದ ಚಟುವಟಿಕೆಯ ಕೇಂದ್ರಗಳು, ಉತ್ಸಾಹದ ಚಿಲುಮೆಗಳು !


ಮೂರು ಈಚಲುಜಾತಿಯ- ಮರಗಳು... ಅಥವಾ ಪಾಮ್ ಅಂತೀರೋ ಏನೋ ಗೊತ್ತಿಲ್ಲ. ಹಾ ! ಈ ಮರಗಳಲ್ಲಿ ಮುಳ್ಳಿರುವುದಿಲ್ಲ....!


ಎಲ್ಲೆಲ್ಲಿ ನೋಡಿದರೂ ಸರೋವರಗಳು, ಬಾತ್ ಕೋಳಿಗಳು, ಆದರೆ, ಗುಬ್ಬಿ, ಕಾಗೆ, ಹದ್ದು, ಕೋಗಿಲೆ, ಮರಕುಟಕ ಅವೆಲ್ಲಾ ನಮ್ಮ ದೇಶದಲ್ಲಿ ಮಾತ್ರವೇನೋ...


ಸುಂದರವಾದ ಈಜುಕೊಳ...ಜನರೇ ಇಲ್ಲ... ರಶ್ ಎಲ್ಲಿ ಬಂತು ? ಈಜೇ ಬರದ ನಮಗೆ ಸ್ವಲ್ಪ ಬೇಸರವಾಯಿತು....


ಪ್ರಶಾಂತ ವಾತಾವರಣ, ಶಿವಮೊಗ್ಗದಲ್ಲೋ, ಅಥವಾ ಶೃಂಗೇರಿಯಲ್ಲೋ ಇದ್ದಹಾಗೆ ಭಾಸವಾಯಿತು....


’ಅವೆನ್ಯೂ ಆಫ್ ಆರ್ಟ್ಸ್” ನ ಮುಂದೆ... ವರ್ಷದ ಕೆಲವು ಸಮಯಗಳಲ್ಲಿ ಜಾತ್ರೆಯಷ್ಟು ಜನಜಂಗುಳಿ ಇಲ್ಲಿ ಸೇರುತ್ತದೆ. ನೃತ್ಯ, ನಾಟಕ, ಪ್ರಶಸ್ತಿಪ್ರದಾನ ಸಮಾರಂಭಗಳು, ಲೈವ್ ಶೋಗಳು, ಪಪೆಟ್ ಶೋಗಳು, ಮದುವೆಗಳು ಇದ್ದಾಗ...


ಸರೋಜ ಫೋಟೋ ತೆಗೆಯಲು ’ಯಾರೋ ದಾರಿಹೋಕ ಯುವತಿ ’ ಯನ್ನು ಕೇಳಿದಾಗ, ಆಕೆ, "ಒಹ್ ಶೂರ್ " "ಯು ವಾಂಟ್ ಪಿಕ್ಚರ್ಸ್ " ? ಅಂದವಳೆ, ಕ್ಯಾಮರಾದಲ್ಲಿ ಕ್ಲಿಕ್ಕಿಸಿದಳು. ’ನೋಡಿ ಇದು ಸರಿಯಾಗಿದೆಯೋ ಹೇಗೋ ನನಗೆ ತಿಳಿಯದು,’ ಅಂದಾಗ, ಆಕೆಯ ಸೌಜನ್ಯತೆಗೆ ಮನಸ್ಸಿನಲ್ಲೇ ವಂದಿಸಿದೆವು. ’ಥ್ಯಾಂಕ್ಯೂ ಮ್ಯಾಮ್, ’ ಎಂದಷ್ಟೆ ನಾವು ಹೇಳಿದ್ದು....( ನಾನು ಅವೆನ್ಯೂ ಆಫ್ ಆರ್ಟ್ಸ್ ನ ಭವನದ ಒಳಗೆ ಹೋಗಿದ್ದೆ.)


ಬೆಳಿಗ್ಯೆ ಮಧ್ಯಾನ್ಹ, ವಾಕಿಂಗ್ ಹೋದಾಗ, ನಾವು ಈ ಹೋಟೆಲ್ ಮುಂದೇ ಹೋಗುತ್ತಿದ್ದೆವು. ಅದಕ್ಕೊಂದು ಕಾಂಪೌಂಡೂ ಇರಲಿಲ್ಲ. ಯಾಕೆ ಬೇಕು, ಇಲ್ಲಿ ?


ಪಾಮ್ ಮರಗಳೇ ಎಲ್ಲೇಲ್ಲೂ, ಅದೂ ವೈವಿಧ್ಯಪೂರ್ಣ... ಅದೆಶ್ಟೋ ಬಗೆಯ ಪಾಮ್ ಗಳಿವೆಯೆಂದು ’ ನೆಟ್ ’ ನಲ್ಲಿ ಓದಿದಾಗ ಗೊತ್ತಾಯಿತು....

ಆಕಡೆ- ಈಕಡೆ.....


"೩೪೦೦ ಅವೆನ್ಯೂ ಆಫ್ ಆರ್ಟ್ಸ್ ನ, " ’ಹೌಸಿಂಗ್ ಕಾಂಪ್ಲೆಕ್ಸ್ ” ನ ಪ್ರಮುಖದ್ವಾರ....
.

ಕ್ಯಾಲಿಫೋರ್ನಿಯದ ದಷ್ಟ-ಪುಷ್ಟ ತರಕಾರಿಗಳು, ಹಣ್ಣುಹಂಪಲುಗಳು, ಮತ್ತು ಪರಿಮಳಯುಕ್ತ-ಹೂಗಳ, ಸೊಬಗೇ ಬೇರೆ...

1 comment:

Holalkere Laxmivenkatesh said...

This place was just opposite to "Fisherman's Wharf", and it is one of the main center, from the Tourist point of view..