Pages

Monday, September 10, 2012

ಕ್ಯಾಲಿಫೋರ್ನಿಯದಿಂದ ಚಿಕಾಗೋ, ಬ್ಲೂಮಿಂಗ್ಟನ್, ಕೊಲಂಬಿಯವರೆಗಿನ ನಮ್ಮ ಎರಡೂವರೆ ತಿಂಗಳ ಪ್ರಯಾಣ, ಜ್ಞಾನವರ್ಧಕವಾಗಿಯೂ ರೋಚಕವೂ ಆಗಿತ್ತು !

"ದೇಶ ಸುತ್ತಬೇಕು, ಕೋಶ ಓದಬೇಕು, " ಎನ್ನುವ ಮಾತು ಎಷ್ಟು ನಿಜವಾದದ್ದು ! ನಮಗೆ ಪಾಶ್ಚಿಮಾತ್ಯದೇಶಗಳನ್ನು ಸುತ್ತಲು,  ಅಲ್ಲಿನ ನವ-ನಾಗರೀಕತೆಯನ್ನು ಅರಿಯುವ ಆಸೆ, ಆಸಕ್ತಿ, ಮೊದಲಿನಿಂದಲೂ ಇತ್ತು.  ವಿಶ್ವದ ವಲಸಿಗರ ನಾಡಾದ ಅಮೆರಿಕಕ್ಕೆ ಬಂದಮೇಲೆ, ಹೆಚ್ಚು ಕಡಿಮೆ ಪ್ರಪಂಚದ ಎಲ್ಲಾ ಕಡೆಯಿಂದ ಬಂದು ನೆಲೆಸಿದ ಜನರನ್ನೆಲ್ಲಾ ನೋಡುವ ಸುಸಂಧಿ ಒದಗಿತು. ಅವರ ಆಚಾರ,ವ್ಯಹಹಾರ, ಉಡುಪು, ಮುಂತಾದವುಗಳನ್ನು ನಾವು ಹತ್ತಿರದಿಂದ ನೋಡಿದೆವು. ಚೈನಿಜನರು, ಜಪಾನಿಯರು, ಕೊರಿಯನ್ನರು, ಮೆಕ್ಸಿಕನ್ನರು, ರಷ್ಯನ್ನರು, ಸ್ಪಾನಿಷ್, ಪೋರ್ಚುಗೀಸ್, ಫ್ರೆಂಚ್, ಮತ್ತಿತರ ಜನಾಂಗದವರು ಎಲ್ಲರೊಂದಿಗೆ ಹೊಂದಿಕೊಂಡು, ಸೌಹಾರ್ದಮಯ ಜೀವನವನ್ನು ನಡೆಸುತ್ತಿದ್ದಾರೆ. ಭಾರತದಿಂದ, ಪಂಜಾಬಿಗಳು, ಮಹಾರಾಷ್ಟ್ರದವರು, ಕರ್ನಾಟಕದವರು, ಆಂಧ್ರ, ತಮಿಳುನಾಡು, ಕೇರಳ, ಬಂಗಾಳ, ಉತ್ತರ ಪ್ರದೇಶ, ಬಿಹಾರ, ಒರಿಸ್ಸ, ಮತ್ತು ಮಧ್ಯಪ್ರದೇಶಗಳಿಂದ ಜನ ಬಂದು, ತಮ್ಮ ಸಾಹಿತ್ಯ, ಸಂಸ್ಕೃತಿ, ಸಂಗೀತ, ನೃತ್ಯಗಳಿಂದ ಅಮರಿಕದ ಜೀವನಕ್ರಮಕ್ಕೆ ತಮ್ಮ ಕೊಡುಗೆಯನ್ನು ಕೊಟ್ಟಿದ್ದಾರೆ.
ನಾವು ಭಾರತವನ್ನು ೨೦೦೮ ರ, ಜುಲೈ, ೪ ರಂದು ಬಿಟ್ಟು, ’ಮುಂಬೈನ ಸಹಾರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ದಿಂದ 'ಕಾಂಟಿನೆಂಟಲ್ ಏರ್ಲೈನ್ಸ್ ' ನಲ್ಲಿ ಯಾನಮಾಡಿ ೧೬/೧/೨ ಗಂಟೆಯನಂತರ ನ್ಯೂವಾರ್ಕ್ ತಲುಪಿದೆವು. ಜುಲೈ ೪, ಅಮೆರಿಕದ ಸ್ವಾತಂತ್ರ್ಯದಿನೋತ್ಸವದ ದಿನ ! ಮತ್ತೆ ಅಲ್ಲಿಂದ ೯ ಗಂಟೆಯ ವಿಮಾನಯಾನದ ಬಳಿಕ, ’ಲಾಸ್ ಎಂಜಲೀಸ್ ಏರ್ಪೋರ್ಟ್’ ತಲುಪಿದೆವು.  ಅಲ್ಲಿಂದ  ನಮ್ಮ ಮಗನ ಜೊತೆ, ೧ ಗಂಟೆಯ ಡ್ರವ್ ನಂತರ, ಕ್ಯಾಲಿಫೋರ್ನಿಯದ ’ಆರೇಂಜ್ ಕೌಂಟಿ’ ಯ, ಅವನ ಮನೆಯನ್ನು ಸೇರಿದೆವು.
ಒಟ್ಟಾರೆ ಅಮೆರಿಕದಲ್ಲಿ ಇದ್ದದ್ದು ಎರಡೂವರೆ ತಿಂಗಳು. ಅದರಲ್ಲಿ,  ಕ್ಯಾಲಿಫೋರ್ನಿಯದಲ್ಲಿ ಸುಮಾರು ೨೮ ದಿನ, ಕೊಲಂಬಿಯದಲ್ಲಿ ೧೮ ದಿನ,  ಚಿಕಾಗೋನಲ್ಲಿ ೫ ದಿನ, ಉಳಿದ ದಿನಗಳನ್ನು ಇಲಿನಾಯ್, ಸ್ಯಾನ್ ಫ್ರಾನ್ಸಿಸ್ಕೊ, ಸಿಯಾಟಲ್, ಕಾಸ್ಟಮೆಸ, ಸಾಂಟಕ್ಲಾರ ಗಳಲ್ಲಿ ಕಳೆದೆವು. ಚಿಕಾಗೊ ನಗರದಲ್ಲಿ ಅಮೆರಿಕದ ಕನ್ನಡ ಸಂಘಗಳೆಲ್ಲಾ ಒಟ್ಟುಗೂಡಿ ಏರ್ಪಡಿಸಲಾಗಿದ್ದ, ’ಅಕ್ಕ ವಿಶ್ವಕನ್ನಡ ಸಮ್ಮೇಳ ’ ನದ ನಮ್ಮ ಸವಿ-ನೆನಪುಗಳು ಇನ್ನೂ ಹಸಿರಾಗಿವೆ.
ಅಮೆರಿಕದಲ್ಲಿದ್ದ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸ್ಥಳಗಳನ್ನು ನಮ್ಮ ಮಗನ ಕೆಲಸದ ಸಮಯದಲ್ಲಿ ಸಿಕ್ಕ ಬಿಡುವಿನ ವೇಳೆಯದಿನಗಳಲ್ಲಿ ಮಾತ್ರ ನೋಡಿ ಆನಂದಿಸಿದೆವು. ಅವುಗಳಲ್ಲಿ ಸಮುದ್ರತಟಗಳು, ಮಾಲ್ ಗಳು, ಕೆಲವು ಫುಟ್ಬಾಲ್ ಸ್ಟೇಡಿಯಮ್ ಗಳು, ನದಿತೀರಗಳು, ಉತ್ತಮ ರೆಸ್ಟೊರೆಂಟ್ ಗಳು ಸೇರಿವೆ.  ಕೆಲವನ್ನು ನನ್ನ ಪ್ರೀತಿಯ ಸಂಪದೀಯರ ಮಧ್ಯೆ ಹಂಚಿಕೊಂಡಿದ್ದೇನೆ. ಕೆಲವು ನಗರಗಳಾದ ’ಸಿಯಾಟಲ್, ’ ”ಸ್ಯಾನ್ ಫ್ರಾನ್ಸಿಸ್ಕೊ, ’ ಗಳ ಬಗ್ಗೆ ಚಿತ್ರಗಳನ್ನು ಪಟ್ಟಿಮಾಡಿ, ವಿವರಿಸಿದ್ದೇನೆ.” ಡಿಸ್ನಿಲ್ಯಾಂಡ್ ’ನಮಗೆ ಮುದಕೊಟ್ಟ ತಾಣಗಳಲ್ಲೊಂದು. ಕೆಲವು ಜಲಪಾತಗಳು, ಗುಹೆಗಳು, ಜಲಾಶಯಗಳನ್ನು ವಿವರಿಸಿದ್ದೇನೆ. ಚಿಕಾಗೋ ನಗರದ ಬಗ್ಗೆ, ಕೆಲವು ತಿಳಿದಷ್ಟು  ಮಾಹಿತಿಗಳನ್ನು ಒದಗಿಸಿದ್ದೇನೆ. ಚಿಕಾಗೋ ನಗರಕ್ಕೆ ಹೋಗಿಯೂ, ’ವಿವೇಕನಂದರ ಸ್ಮಾರಕ ’ಕ್ಕೆ ಹೋಗಲಿಲ್ಲವಲ್ಲ ಎನ್ನುವ ಕೊರಗು ಇದ್ದೇ ಇದೆ. ಚಂದ್ರಣ್ಣ ವಿವೇಕಾನಂದರ ಪರಮ ಪ್ರಿಯನಾಗಿದ್ದ. ಅವನ ಮಾತಿನ ಪ್ರಕಾರ, ಯಾಕೋ, ಅವನೂ ಆ ಜಾಗವನ್ನು ನೋಡಲು ಹೋಗಿಲ್ಲ ಎನ್ನುವ ಮಾತಿನಲ್ಲಿ, ಏನಾದರೂ ಸತ್ವವಿರಬಹುದೇ !
’ಅಕ್ಕಾ ವಿಶ್ವಕನ್ನಡ ಸಮ್ಮೇಳನ ’ದ ಬಗ್ಗೆ, ಹಾಗೂ ನಮ್ಮ ಕನ್ನಡಿಗರ ಸಾಧನೆಗಳ ಬಗ್ಗೆ, ಒಟ್ಟಾರೆ ವಲಸಿಗರ ಬಹುದೊಡ್ಡನಾಡಾದ ಅಮೆರಿಕದ ಬಗ್ಗೆ, ನನಗೆ ತಿಳಿದಷ್ಟುಮಟ್ಟಿಗೆ ಹಲವಾರು ಲೇಖನಗಳನ್ನು ಬರೆದಿದ್ದೇನೆ. ಅವುಗಳಲ್ಲಿ ಕೆಲವು ’ಸಂಪದ ಕನ್ನಡ ತಾಣ’ದಲ್ಲಿ ಮೂಡಿಬಂದಿವೆ. ಅಮೆರಿಕದ ಅಕ್ಕಾ ವಿಶ್ವಕನ್ನಡ ಸಮ್ಮೇಳನದಲ್ಲಿ ಅಂತಿಮವಾಗಿ, ’ಕರ್ಣಾಟಕ ಭಾಗವತ,’ ಬೃಹತ್ ಗ್ರಂಥದ ಬಿಡುಗಡೆಯ ಸಮಾರಂಭದ ಸನ್ನಿವೇಶ ನನ್ನನ್ನು ಸೆಳೆಯಿತು. ಅದೊಂದು ಅದ್ಭುತ ಗ್ರಂಥ. ಸಂಶೋಧನೆ, ಸಂಪಾದನೆ, ಹಾಗೂ ಸಂಪೂರ್ಣ ಗ್ರಂಥರಚನೆಯ ಕಾರ್ಯ, ಅದರ ಹಿಂದಿನ ಸುಮಾರು ಹದಿನೈದು ವರ್ಷಗಳ ನಿರಂತರಪರಿಶ್ರಮ, ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಇರುವ ಕಳಕಳಿ, ನನ್ನನ್ನು ಮೂಕನನ್ನಾಗಿ ಮಾಡಿತ್ತು. ತಮ್ಮ ಬಿಡುವಿಲ್ಲದ ಅದ್ಯಾಪನ, ಸಂಶೋಧನೆಗಳ ವೃತ್ತಿಜೀವನದಲ್ಲಿ ಭಾಗವತಕ್ಕಾಗಿ, ಅಮೂಲ್ಯಸಮಯವನ್ನು ವಿನಿಯೋಗಿಸಿ, ಕೊನೆಯಲ್ಲಿ ಸಫಲತೆಯನ್ನು ಪಡೆದು ಕನ್ನಡಿಗರಿಗೆಲ್ಲಾ ಕಳಸಪ್ರಾಯರಾದ, ಡಾ. ಚಂದ್ರಶೇಖರ್ ನನಗೆ ಬಹುಪ್ರಿಯರಾದರು ! ಚಿಕಾಗೋ ನಗರದಲ್ಲಿ ಅವರಿಗೆ, ಸನ್ಮಾನಮಾಡಲಾಯಿತು. ಇದು ಕನ್ನಡಿಗರೆಲ್ಲಾ ಹೆಮ್ಮಪಡುವ ಸಂಗತಿ. ಇನ್ನೊಂದು ವಿಷಯ. ನನ್ನ ಅದೃಷ್ಟಕ್ಕೆ, ಅವರು ನನ್ನ ಸೋದರರೂ ಹೌದು !! ಆ ಸಮಾರಂಭದಲ್ಲಿ ನಾನು ನನ್ನ ಹೆಂಡತಿ ಮತ್ತು ಮಗ, ಪ್ರಕಾಶ್ ಭಾಗಿಯಾಗಿದ್ದು ನಮ್ಮ ಜೀವನದ ಪರಮೋದ್ದೇಶಗಳಲ್ಲೊಂದಾಗಿತ್ತು, ಎನ್ನುವುದು ನಮ್ಮ ಅಭಿಮತ ! ಖಂಡಿತವಾಗಿಯೂ ಇದು ನಮ್ಮ ಜೀವನದಲ್ಲಿನ ಮರೆಯಲಾರದ ಘಟನೆಗಳಲ್ಲೊಂದು !
ನಮ್ಮ ಹಿರಿಯಣ್ಣನವರ ಮಗಳು, ಚಿ. ಸೌ. ಹರ್ಷ, ಮತ್ತು ಅವಳ ಪತಿರಾಯರು, ಚಿ. ಅಜಿತಾ, ಪಕ್ಕದ ಇಲಿನಾಯ್ ರಾಜ್ಯದ ನಾರ್ಮಲ್ ಬ್ಲೂಮಿಂಗ್ಟನ್ ನಲ್ಲಿ ವಾಸವಾಗಿದ್ದವರು, ನಮ್ಮನ್ನು ಅವರ ಮನೆಗೆ ಕರೆದುಕೊಂಡುಹೋಗಿ. ಮಾಡಿದ ಆತಿಥ್ಯ, ನಮಗೆ ವಿದೇಶದಲ್ಲಿನ ಒಂದು ಹೊಸ ಅನುಭವವನ್ನು ದೊರಕಿಸಿತು. ಅವರ ಮಗಳು, " ಮುದ್ದು ಗೌರಿ," ನಮ್ಮ ಕಣ್ಮಣಿಯಾಗಿದ್ದಳು. ಅವಳ ಮುಗ್ಧಮಾತುಗಳು ನಮ್ಮ ಕಿವಿಯಲ್ಲಿ ಇಂಪಾದ ಸಂಗೀತವನ್ನು ಪ್ರತಿಧ್ವನಿಸುತ್ತಿವೆ !
ಅಮೆರಿಕದಲ್ಲಿ ನಾವು ನೋಡಿದ ’ಅಮೆರಿಕದ ಟೆಲಿವಿಶನ್ ಕಾರ್ಯಕ್ರಮಗಳಲ್ಲಿ ,’ ” ದ ಗ್ರೇಟ್ ಅಮೆರಿಕನ್ ವೀಡಿಯೋಸ್ ’ ಬಹಳ ಇಷ್ಟವಾಯಿತು. ’ಜೆಫ್ ಡನ್ಹ್ಯಾಮ್ ರವರ ಪಪಟ್ ಶೋ”, ನಮಗೆ ಅತ್ಯಂತ ಮುದನೀಡಿದ ಶೊಗಳಲ್ಲೊಂದು ! ಅದರ ಬಗ್ಗೆ ನನ್ನ ಲೇಖನದಲ್ಲಿ ವಿವರವಾಗಿ ಬರೆದಿದ್ದೇನೆ.
ಅಮೆರಿಕದಲ್ಲಿನ ಕೆಲವು ಸಾರ್ವಜನಿಕ ಸಂಸ್ಥೆಗಳಾದ ’ಪೋಸ್ಟ್ ಆಫೀಸ್”, ವೃದ್ಧರ-ದಿನದಲ್ಲಿ ಇರುವ ವ್ಯವಸ್ಥೆ, ’ಸಾರ್ವಜನಿಕ ಪುಸ್ತಕಸಂಗ್ರಹಾಲಯ,” ’ ಪುಟ್ಟಮಕ್ಕಳ ಕ್ರಷ್,” ಅಂಗವಿಕಲರು, ವೃದ್ದರು, ಸ್ತ್ರೀಯರು, ಮಕ್ಕಳ ಬಗ್ಗೆ, ಇನ್ನೂ ಅನೇಕ ಸಂಗತಿಗಳನ್ನು ಪಟ್ಟಿಮಾಡಿ, ನಮ್ಮ ಸಂಪದೀಯರ ಜೊತೆ ಹಂಚಿಕೊಂಡಿದ್ದೇನೆ. ಹಲವಾರು ಸಹೃದಯರು ನನ್ನ ಲೇಖನಗಳಿಗೆ ಸ್ಪಂದಿಸಿ, ಒಳ್ಳೆಯಮಾತಾಡಿದ್ದಾರೆ. ಅವರಿಗೆಲ್ಲಾ ನನ್ನ ವಿನಯಪೂರ್ವಕ ಪ್ರಣಾಮಗಳು.
ಅಮೆರಿಕದೇಶದ ಪಶ್ಚಿಮದ ತಟದಿಂದ ಅಂದರೆ, ಕ್ಯಾಲಿಫೋರ್ನಿಯದಿಂದ, ಹೆಚ್ಚುಕಡಿಮೆ, , ಮದ್ಯ-ಪೂರ್ವತಟದವರೆಗೆ,ಅಂದರೆ. ’ಚಿಕಾಗೋನಗರ ’ ದ ವರೆಗೆ, ಮಾಡಿದ ಪ್ರಯಾಣ, ನಮಗೆ ನಿಜಕ್ಕೂ ನೀಡಿದ ಅನುಭವ ಅವರ್ಣನೀಯವಾಗಿತ್ತು !
ಅಮೆರಿಕದಿಂದ ವಾಪಸ್ ಬರುವಾಗ, ಯೂರೋಪಿನ, ಜರ್ಮನಿಯವಿಮಾನ ನಿಲ್ದಾಣದಲ್ಲಿ, ಸ್ವಲ್ಪ ಕಾಲ ತಂಗಿದ್ದು, ಮುಂಬೈಗೆ ಹೊರಟು ಬಂದೆವು. ’ಲುಫ್ತಾನ್ಝ ಏರ್ ಲೈನ್ಸ್ ’ನಲ್ಲಿ ಪ್ರಯಾಣಬೆಳಸಿ ಸೆಪ್ಟೆಂಬರ್, ೧೭ ರಂದು ’ಮುಂಬೈನಗರದ ಸಹಾರ ಏರ್ಪೋರ್ಟ್,’ ನಲ್ಲಿ ಬಂದಿಳಿದು, ಮನೆಸೇರಿದೆವು.
ಈಗ, ಶ್ರೀ. ಓಬಾಮಾರವರು ಅಮೆರಿಕದ ರಾಷ್ಟ್ರಾಧ್ಯಕ್ಷರಾದಮೇಲೆ, ಬದಲಾವಣೆಯ ಬಿರುಗಾಳಿ ಅಮೆರಿಕದುದ್ದಕ್ಕೂ ಬೀಸಿದೆ. ಹಿರಿಯನಾಗರಿಕರು, ಮಹಿಳೆಯರು, ಉದ್ಯಮಿಗಳು, ಬುದ್ಧಿಜೀವಿಗಳಿಗೆ ಈ ಬದಲಾವಣೆ ಅವಶ್ಯವಾಗಿತ್ತು. ಆಫ್ರಿಕನ್ ಅಮೆರಿಕನ್ನರು, ಚೈನೀಸ್, ಭಾರತೀಯ, ಜಪಾನ್, ಕೊರಿಯ, ಹಾಗೂ ಯೂರೋಪಿಯನ್ ಅಮೆರಿಕನ್ನಿರಿಗೆ, ತಮ್ಮ ಕೊರತೆಗಳನ್ನು ಅಭಿವ್ಯಕ್ತಪಡಿಸಲು ಒಂದು ಸುಸಂಧಿ ಏರ್ಪಟ್ಟಿದೆ. ಹಣದ ವ್ಯವಸ್ಥೆಯಕುಸಿಯುವಿಕೆ, ಎಲ್ಲರನ್ನೂ, ಧೃತಿಗೆಡೆಸಿದೆ. ಅಮೆರಿಕ ಮತ್ತು ವಿಶ್ವದ ಅರ್ಥ ವ್ಯವಸ್ಥೆ, ಇನ್ನೂಸರಿಯಾದ ದಾರಿಗೆ ಬರಲು ಕೆಲವಾರುತಿಂಗಳುಗಳೇ ಬೇಕಾಗಬಹುದು
ಒಂದು ವಿಷಯವೆಂದರೆ, ಅಮೆರಿಕನ್ನರು ಹೊಸದೇನನ್ನಾದರೂ ಮುಕ್ತಹಸ್ತದಿಂದ ಸ್ವಾಗತಿಸುತ್ತಾರೆ. ಅವನ್ನು ಅನುಷ್ಠಾನ ತರುವಲ್ಲೂ ತುಂಬಾ ಶ್ರಮವಹಿಸುತ್ತಾರೆ. ಕೊರಗೆಕಂಡಾಗ ಅದನ್ನು ಬಿಟ್ಟು ಬೇರೆಕಡೆ ತಮ್ಮ ಗಮನವನ್ನು ಎಸೆಯುತ್ತಾರೆ. ಬೇಗ ಪ್ರತಿಕ್ರಯಿಸುವ ಅವರ ಮನೋಗುಣ ಕೆಲವು ಹೊಸ ಆವಿಶ್ಕಾರಗಳಿಗೆ ಎಡೆಮಾಡಿಕೊಟ್ಟಿದೆ, ನಿಜ. ಕೆಲವೊಮ್ಮೆ ಹಲವಾರು ಸಮಸ್ಯೆಗಳಿಗೂ ದಾರಿಮಾಡಿಕೊಟ್ಟಿರುವುದನ್ನು ನಾವೆಲ್ಲಾ ಮನಗಂಡಿದ್ದೇವೆ.
ಅಮೆರಿಕದ ಹೊಸ ಅಧ್ಯಕ್ಷರಾಗಿ ಶ್ರೀ. ಓಬಾಮ ಪ್ರಚಂಡ ಬಹುಮತದಿಂದ ಆಯ್ಕೆಯಾಗಿ ಬಂದಿದ್ದಾರೆ. ಯುವ ಜನರ ಐಡಲ್ ಆಗಿ, ಅಮೆರಿಕನ್ನದ ನಿಜವಾದ ಸಂಕಷ್ಟದ ಸಮಯದಲ್ಲಿ ಒಬ್ಬ ಪ್ರವಾದಿಯಾಗಿ ಅವರು ಬಂದಿರುವುದು, ಗಾಯಕ್ಕೆ ಮಲಮ್ ಹಚ್ಚಿದತರಹವಿದೆ. ಕರಿಯರ ಮೇಲಿನ ಶತಮಾನಗಳ ದೌರ್ಜನ್ಯದ ಬಳಿಕ, ಅಮೆರಿಕನ್ನರ ಮನವನ್ನು ಗೆದ್ದು, ತಮ್ಮ ಸಮರ್ಥ ವ್ಯಕ್ತಿತ್ವ, ಹಾಗೂ ನಡವಳಿಕೆಗಳಿಂದ ಅವರಿಗೆ ಭರವಸೆಮೂಡಿಸಿ ಓಬಾಮ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಅಮೆರಿಕ ಹಾಗೂ ವಿಶ್ವವೆಲ್ಲಾ ವಿಸ್ಮಯದಿಂದ ಅವರ ಕಡೆ ನೋಡುತ್ತಿದೆ. ಅಮೆರಿಕದ ಕಷ್ಟದ ದಿನಗಳು ಮುಗಿಯುವುವೆ ? ಮತ್ತೆ ಅಮೆರಿಕದ ಅರ್ಥ ವ್ಯವಸ್ಥೆ ಮೊದಲಿನಂತೆ ಮಜಬೂತ್ ಆಗುವುದೆ ?
ಮುಂದಿನ ದಿನಗಳು, ನಮಗೆ ’ಲಿಟ್ಮಸ್ ಟೆಸ್ಟ್ ,’ ನ ದಿನಗಳಾಗಿವೆ. ಬದಲಾವಣೆ ಯಾವದಿಕ್ಕಿನಲ್ಲಿ ಸಾಗಿದೆ ? ನಿಜವಾಗಿಯೂ ಸಾಮಾನ್ಯ ಅಮೆರಿಕನ್ನನಿಗೆ ಇದರಿಂದ ಫಾಯಿದೆಯಾಗಿದೆಯೇ ಎನ್ನುವುದು ತಕ್ಷಣ ತಿಳಿದುಹೋಗುತ್ತದೆ. ಯಾವುದಕ್ಕೂ ಸಮಯವೊಂದಿದೆಯಲ್ಲಾ ? ಅದೇ ಎಲ್ಲವನ್ನೂ ನಿರ್ಧರಿಸುತ್ತದೆ.....!
ಈ ಸಂಗತಿಗಳನ್ನು " ಸಂಪದ, ಕನ್ನಡ ತಾಣ, " ದಲ್ಲಿ ನನ್ನ ಗೆಳೆಯರೊಂದಿಗೆ ಹಂಚಿಕೊಂಡಿದ್ದೇನೆ. ಅವೆಲ್ಲವನ್ನೂ ಕ್ರೋಢೀಕರಿಸಿ, ಈ ಅತಿ-ದೀರ್ಘವಾದ ಬ್ಲಾಗ್ ನಲ್ಲಿ ನಿವೇದಿಸಿಕೊಂಡಿದ್ದೇನೆ. ಇವು ಅತಿ ಕಡಿಮೆ ಜನಸಂಪರ್ಕ, ಹಾಗೂ ಲೋಕಾನುಭವದ ನನ್ನ ಅನಿಸಿಕೆಗಳು ಮಾತ್ರ. ಅವು ಸರಿ-ಬೆಸ ಇರುವ ಸಾಧ್ಯತೆಗಳನ್ನು ನಾನು ತಳ್ಳಿಹಾಕುತ್ತಿಲ್ಲ. ಅಕಸ್ಮತ್ತಾಗಿ ಯಾರಾದರೂ ಈ ಬ್ಲಾಗನ್ನು ಓದಿದ್ದರೆ, ಅವರಿಗೂ ನನ್ನ ಅನಂತಾನಂತ ವಂದನೆಗಳು. "ಇಂಟರ್ ನೆಟ್ " ನ ಪೂರ್ತಿ ಬ್ಲಾಗುಗಳೇ ತುಂಬಿರುವಾಗ ಯಾವ ಯಾವುದನ್ನು ಓದಲು ಸಾಧ್ಯ ? ಅದೂ ನಿಜ ಅಲ್ಲವೇ !

Tuesday, April 21, 2009

’ಪಶ್ಚಿಮಾರ್ಧಗೋಳ,’ ಕ್ಕೆ ಹಾರಿದ್ದ ನಾವು, ಮರಳಿ ಭಾರತದ ಕಡೆಗೆ ನಮ್ಮ ಪ್ರಯಾಣ ಬೆಳೆಸಿದೆವು !

" ನಾಚ್ಕೋಬೇಡಿ, ಇನ್ನೂ ಹತ್ತಿರದಲ್ಲಿ ಕೂಡ್ರಿ, " ಎಂದು ಹೇಳಿ, ಒಬ್ಬ ಭಾರತೀಯ ಯಾತ್ರಿ, ನಮ್ಮ ಫೋಟೋ ತೆಗೆದಾಗ.......ಊಟ ಬಂತು ಊಟ, ನಮ್ಮ ಸಸ್ಯಾಹಾರಿ ಅಂತ ಕರೆಯೋ ಊಟ.....


ಸಸ್ಯಾಹಾರಿ ಊಟಕ್ಕೆ ನಾವು ಕಾದುಕುಳಿತಿದ್ದೆವು.....


ಲುಫ್ತಾಂಝಾ ವಿಮಾನದ ಒಳಗೆ......


ವಿಮಾನ ನಿಲ್ದಾಣದಲ್ಲಿ.....


ವಿಮಾನ ನಿಲ್ದಾಣದಲ್ಲಿ ಸ್ವಲ್ಪಹೊತ್ತು.....


ಕಿಟಕಿಯ ಹೊರಗೆ ಮೋಡಗಳ ಸಮುದಾಯ, ಕಣ್ಣಿಗೆ ಮುದಕೊಡುತ್ತದೆ.....


ಕೈನಲ್ಲಿ ಕ್ಯಾಮರ ಇದ್ದರೆ, ಕೋತಿ ಕೈಲಿ ಮಾಣಿಕ್ಯ ಕೊಟ್ಟಂತೆ, ಅನ್ನೋ ಮಾತು, ನಿಜ ಅನ್ಸುತ್ತೆ ಅಲ್ವೇ ?


ನಮ್ಮ ಕ್ಯಾಲಿಫೋರ್ನಿಯದ ಆರೇಂಜ್ ಕೌಂಟಿ ಮನೆಗೆ, ಸಧ್ಯಕ್ಕೆ ಗುಡ್ ಬೈ ಹೇಳೋಣವೇ ?!


Monday, April 20, 2009

೨೦೦೮ ರ, ಸೆಪ್ಟೆಂಬರ್, ೧೬, ರಂದು ’ ಲುಫ್ತಾಂಜಾ’ ವಿಮಾನದಲ್ಲಿ ತಾಯಿನಾಡಿಗೆ ಮರಳಿದೆವು !

ಲುಫ್ತಾಂಝಾ ವಿಮಾನದ ಒಳ ಭಾಗದ ದೃಷ್ಯ.....

ಗಗನ ಸಖಿಯರ ಆತಿಥ್ಯ....


ಸುಮಾರು ಎರಡೂವರೆ ತಿಂಗಳ ಅಮೆರಿಕ ಯಾತ್ರೆಯ ಬಳಿಕ, ಅನೇಕ ಮಧುರ ಕ್ಷಣಗಳನ್ನು ಮೆಲುಕುಹಾಕುತ್ತಾ, ಪ್ರೀತಿಯ ತಮ್ಮನ ಪರಿವಾರ, ಮಗಳು ಅಳಿಯ, ಮೊಮ್ಮಗು, ಕೊನೆಗೆ ನಮ್ಮ ಪ್ರೀತಿಯ ಮಗ ಪ್ರಕಾಶನಿಂದ ಬೀಳ್ಕೊಂಡು, ಭಾರವಾದ ಮನಸ್ಸಿನಿಂದ ನಾವು ಸ್ವದೇಶಕ್ಕೆ ಮರಳಿದೆವು. ಪಶ್ಚಿಮಾರ್ಧ ಗೋಳದ ಜನರ ಗತಿವಿಧಿಗಳು, ಹವಾಮಾನ, ವಿಧವಿಧದ ಜನರು, ಭಾಷೆ, ಉಡುಪು, ಹಾಗೂ ಎಲ್ಲಕಿಂತ ಮಿಗಿಲಾಗಿ, ನಮಗೆ ಗೋಚರಿದ ನಗುಮುಖ, ಜೀವನೋಲ್ಲಾಸ, ಸೌಹಾರ್ದತೆ, ಸ್ನೇಹಪ್ರಿಯತೆ, ಹಾಗೂ ಯಾವ ವಿಧದ ತೊಡಕಿಲ್ಲದ ವಿಜ್ಞಾನ, ತಂತ್ರಜ್ಞಾನಗಳನ್ನು ಸಮಯೋಚಿತವಾಗಿ ಬಳಸಿಕೊಂಡು ತಮ್ಮದೇ ಅದರೀತಿಯಲ್ಲಿ ಜೀವನ ನಿರ್ವಹಿಸುವ ಅಮೆರಿಕನ್ನರನ್ನು ನಾವು ವಂದಿಸಿದೆವು. ಅಮೆರಿಕದ ಜೀವನದ ಇನ್ನೊಂದು ಮುಖವನ್ನೂ ಕಣ್ಣಾರೆ ಕಂಡೆವು. ಅವರ ಜೀವನದಲ್ಲಿನ ಸ್ವಚ್ಛಂದ ಪ್ರವೃತ್ತಿ, ಅತಿಯಾದ ಸ್ವಾತಂತ್ರ್ಯ, ಹಾಗೂ ಅದರಿಂದ ಆಗುತ್ತಿರುವ ಅನಾಹುತಗಳೂ ನಮಗೆ ಗೋಚರಿಸಿದವು ! ಒಟ್ಟಿನಲ್ಲಿ ಯಾವ ತೊಂದರೆಯೂ ಇಲ್ಲದೆ, ಸುಖವಾಗಿ ವಾಪಸ್ ಬಂದೆವು....

ನಮ್ಮ " ಲುಫ್ತಾಂಜಾ ವಿಮಾನ " ದಲ್ಲಿ, ಗಗನ ಸಖಿಯರ ಆತಿಥ್ಯ ಬಹಳ ಚೆನ್ನಾಗಿತ್ತು......


’ಫ್ರಾಂಕ್ಫರ್ಟ್ ವಿಮಾನ ನಿಲ್ದಾಣ ’ ದಲ್ಲಿ ನಮಗೆ ವಿಶ್ರಮಿಸಲು ತುಂಬಾವೇಳೆ ಇತ್ತು....


’ಜರ್ಮನಿಯ, ಫ್ರಾಂಕ್ಫರ್ಟ್ ವಿಮಾನನಿಲ್ದಾಣದಲ್ಲಿ”...


ಜರ್ಮನಿಯ ಫ್ರಾಂಕ್ಫರ್ಟ್ ನ ವಿಮಾನನಿಲ್ದಾಣದಲ್ಲಿ.....


ಸುಂದರ ವಿಮಾನ ನಿಲ್ದಾಣದೊಳಗೆ  ತಾಯಿ-ಮಕ್ಕಳು ಕುಳಿತು ಅರಾಮವಾಗಿ ಮಾತುಕತೆ ನಡೆಸುತ್ತಿದ್ದರು . ಗಲ್ಲಾಟೆಯೇ ಇಲ್ಲ !


ನಮಗೆ ಕೂಡ್ರಲು ಜಾಗ ಸಿಕ್ಕಿತು... ಮುಂಬೈಗೆ ಹೋಲಿಸಿದಾಗ ಈ ತರಹದ ಮಾತುಕತೆಗಳು, ಸ್ವಾಭಾವಿಕ.....

ಹೆಚ್ಚು ಜನ ಪ್ರಯಾಣಿಕರಿಲ್ಲದ ಅತ್ಯಂತ ಸುವ್ಯವಸ್ಥಿತ, ಹಾಗೂ ಶುಚಿತ್ವಕ್ಕೆ ಹೆಸರಾದ ವಿಮಾನನಿಲ್ದಾಣಗಳು ನಮಗೆ ಮುದ ಕೊಟ್ಟವು...

ನಾವು ವಿಮಾನ ನಿಲ್ದಾಣದಲ್ಲಿ ನಮ್ಮ ಪುಟ್ಟ ಸೂಟ್ ಕೇಸ್ ಸಾಮಾನನ್ನು ಎಳೆದುಕೊಂಡು ನಡೆದೆವು....


ಗಾಜಿನಕಿಟಕಿಯ ಹೊರಗೆ ನಿಂತಿರುವ ಕೆಲವು ವಿಮಾನಗಳ ಚಿತ್ರವನ್ನು ತೆಗೆಯುವ ಮನಸ್ಸಾಗಿತ್ತು....


ವಿಮಾನ ನಿಲ್ದಾಣದಲ್ಲಿ ವಿವಿಧ ವಸ್ತುಗಳ ಮಳಿಗೆಗಳು....


’ಲಾಸ್ ಎಂಜಲೀಸ್ ವಿಮಾನನಿಲ್ದಾಣ ’ ದ ಒಂದು ದೃಷ್ಯ.....


ಪ್ರಕಾಶನಿಂದ ಬೀಳ್ಕೊಂಡು, ನಾವು ಲಾಸ್ ಎಂಜಲೀಸ್ ವಿಮಾನನಿಲ್ದಾಣದಲ್ಲಿ ನಮ್ಮ ವಿಮಾನವನ್ನೇರಲು, ಸುಮಾರು ದೂರ ನಡೆಯಬೇಕಾಯಿತು...


’ಆರೇಂಜ್ ಕೌಂಟಿಯ, ಕಾಸ್ಟಾಮೆಸದ ನಮ್ಮ ಪ್ರಕಾಶನ ವಾಸದ ಮನೆ ’ ಯನ್ನು ಕೊನೆಯಬಾರಿ ಬಿಟ್ಟುಬರುವಾಗ ನಮಗೆ ಸ್ವಲ್ಪ ದುಖಃವಾಯಿತು. ನಮ್ಮ ಊರನ್ನೇ ಬಿಟ್ಟುಹೋಗುತ್ತಿದ್ದೇವೋ ಅನ್ನಿಸಿತ್ತು. ಕಾರಣ, ನಮ್ಮ ಪ್ರೀತಿಯ ಮಗ ಪ್ರಕಾಶನನ್ನು ಬಿಟ್ಟು ಬರುವ ದುಗುಡ ನಮಗೆ ಅತಿಯಾಗಿದ್ದು, ಹಾಗೆ ಅನ್ನಿಸಿತ್ತು.....

ಕೊಲಂಬಿಯದ ’ಸೇಂಟ್ ಲೂಯಿಸ್ ’ ನಿಂದ ’ಲಾಸ್ ಎಂಜಲೀಸ್ ’ ನಗರಕ್ಕೆ ನಮ್ಮ ಪ್ರಯಾಣ !

ಕೆಳಗೆ ಕಾಣಿಸುವ ಸುಂದರ, ವಿಶಾಲವಾದ, ಭವ್ಯ ಬಂಗಲೆ, ನಮ್ಮ ಚಂದ್ರಣ್ಣನ ಮನೆಯ ಎದುರಿಗಿತ್ತು. ಅದಕ್ಕೆ ಕಾಂಪೌಂಡ್ ಸಹಿತ ಇರಲಿಲ್ಲ. ಇಲ್ಲಿನ ಬಹುಪಾಲು ಮನೆಗಳಿಗೆ  ಕಾಂಪೌಂಡ್ ಗೋಡೆಗಳಿಲ್ಲ.  ಹೆಚ್ಚು ಜನರಿಲ್ಲದ ಚಿಕ್ಕ ಜೊಕ್ಕ ಕೊಲಂಬಿಯ ನಗರ, ವಾಸಕ್ಕೆ ಹೇಳಿಮಾಡಿಸಿದ ತಾಣ. ರಸ್ತೆಯಲ್ಲಿ, ದನಕರುಗಳಕಾಟವಿಲ್ಲ, ದಾರಿಹೋಕರು, ಬಿಕ್ಷುಕರುಗಳಿಲ್ಲ, ಕಳ್ಳಕಾಕರ ಭೀತಿಯೂ ಇಲ್ಲವೇನೋ ! ಆದರೆ ಪಕ್ಕದ ಮಿಸ್ಸೂರಿನದಿಯ ಕಾಡಿನಿಂದ ಜಿಂಕೆಗಳ ಹಿಂಡು-ಹಿಂಡು ಮಧ್ಯಾನ್ಹದ ವೇಳೆಯಲ್ಲೇ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈ ಬಂಗಲೆಯನ್ನು ವೀಕ್ಷಿಸಲು ಸುಮಾರು ಜನ ವೀಕ್-ಎಂಡ್ ಗಳಲ್ಲಿ ಬರುತ್ತಿದ್ದರು. ಆಗ ಸ್ವಲ್ಪ ಜನಸಂದಣಿ ಸೇರುತ್ತಿತ್ತು. ಅದೂ ಸ್ವಲ್ಪಗೂ ಶಬ್ದವಿಲ್ಲದೆ ತಮ್ಮ ಕೆಲಸಗಳನ್ನು ಮುಗಿಸುತ್ತಿದ್ದರು. ಅವರೆಲ್ಲಾ.

ಬಂಗಲೆಗೆ ಬೆನ್ನುಮಾಡಿ, ಚಂದ್ರಮನೆಯಕಡೆ ಮುಖಮಾಡಿ ಚಿತ್ರತೆಗೆಸಿಕೊಂಡಾಗ.....


ವಿಮಾನದಲ್ಲಿ ಹಾರಿದಾಗ, ಕೆಳಗೆ ಕಾಣಿಸುವ ನಗರ, ಕಾಡು, ವನಸಿರಿ, ನದಿ, ಹಾಗೂ ನೀಲ ಗಗನ ...
ನಮ್ಮ ಹಿಂದಿನ ಸೀಟಿನ ಸಹಪ್ರಯಾಣಿಕರ ಮಾತುಕತೆ, ಕುಸು-ಕುಸು ನಡೆಯುತ್ತಲೇ ಇತ್ತು....

ನಾವು, ಸಿ-೧೦ ನೇ ದ್ವಾರದಕಡೆಗೆ ಹೋಗಬೇಕಾಗಿತ್ತು....
ಓಹ್ ! ಸಿ. ೧೦ ಬಂತು. ಲಾಸ್ ಎಂಜಲೀಸ್ ನಗರಕ್ಕೆ ಹೋಗುವ ವಿಮಾನವನ್ನು ಇಲ್ಲೇ ನಾವು ಹತ್ತಬೇಕು....
ಕೊಲಂಬಿಯ ನಗರದ ಚಂದ್ರಣ್ಣನ ಮನೆ, ೨೪೦೦, ಲಿಮರಿಕ್ ಲೇನ್ ’ನಿಂದ ನಾವು ’ಶಟಲ್ ಬಸ್,’ ನಲ್ಲಿ ಸೇಂಟ್ ಲೂಯಿಸ್ ವಿಮಾನನಿಲ್ದಾಣವನ್ನು ತಲುಪಿದೆವು. ಆಗಲೇ ಮೀರಾರವರಿಗೆ ಬೆನ್ನಿನ ಶಸ್ತ್ರಚಿಕಿತ್ಸೆಯಾಗಿದ್ದು, ಅವರು ಇನ್ನೂ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅವರಿಗೆ ಸಹಾಯಕ್ಕೆಂದು ಅವರ ತಮ್ಮ 'ರಾಮ್' ಬಂದಿದ್ದರು. ನಾವಿಬ್ಬರೇ ಶಟಲ್ ಬಸ್ಸಿನಲ್ಲಿ ಹೊರಟೆವು. ಸ್ವಲ್ಪ ಈಗಾಗಲೇ ನಾವಿಬ್ಬರೇ ವಿಮಾನದಲ್ಲಿ ಪ್ರಯಾಣಮಾಡಿ ಅಭ್ಯಾಸವಾಗಿದ್ದು, ಸ್ವಲ್ಪ ಧರ್ಯವೂ ಬಂದಿತ್ತು !'ನಂಬರ್ ೧೦ ನೆಯ ದ್ವಾರ ’ ದಿಂದ ನಾವು ’ಲಾಸ್ ಎಂಜಲೀಸ್ ನಗರ ’ಕ್ಕೆ ಪ್ರಯಾಣ ಬೆಳೆಸಲು, ಸ್ವಲ್ಪಹೊತ್ತು ಕಾದೆವು. ......

ವಿಮಾನ ನಿಲ್ದಾಣಗಳಲ್ಲಿ ಕಾಣಿಸುವ ಶುಚಿತ್ವವನ್ನು ಎಷ್ಟು ಬಣ್ಣಿಸಿದರೂ ಸಾಲದು. ನೆಲವಂತೂ ಥಳ-ಥಳ ಹೊಳೆಯುತ್ತಿರುತ್ತದೆ. ಕೆಲಸಗಾರರು, ಕುಳಿತು ಗಪ್ಪಹೊಡೆಯುವ, ಹಾಗೂ ಕೆಲಸಮಾಡುವಂತೆ ನಟಿಸುತ್ತಾ ಕಾಲಹರಣಮಾಡುವ ದೊಡ್ಡ ಕೆಲಸಗಾರರ ತಂಡವಂತೂ ನಮ್ಮ ಕಣ್ಣಿಗೆ ಕಾಣಿಸಲಿಲ್ಲ. ಎಲ್ಲವೂ ನಯಮಿತರೂಪದಲ್ಲಿ ಒಬ್ಬರೋ ಅಥವ ಇಬ್ಬರೋ ನಗುಮುಖದಿಂದ ನಿಭಾಯಿಸುವ ಅತ್ಯಂತ ದಕ್ಷ ಕಾರ್ಯವೈಖರಿಯನ್ನು ಗಮನಿಸದಿದ್ದರೆ, ನಮ್ಮ ಕಣ್ಣು ಕುರುಡೆಂದು ಹೇಳಬೇಕು. ಟ್ರಾಲಿಗಳು ಸುಲಭವಾಗಿ ಕೈಗೆ ಸಿಕ್ಕುವ ತರಹ ಇಟ್ಟಿದ್ದರು. ಕೆಲವು ಕಡೆ, ೧-೨ ಡಾಲರ್ ಟಿಕೆಟ್ ಪಡೆದು ನಾವೇ ತಳ್ಳಿಕೊಂಡು ಬರಬೇಕು.
ಮುಂಬೈನ (ಆ) ವ್ಯವಸ್ಥೆಯ ಸನ್ನಿವೇಶವನ್ನು ಸ್ಮರಿಸಿಕೊಳ್ಳುವುದು ಅನಿವಾರ್ಯ. ವಿಮಾನ ನಿಲ್ದಾಣದಲ್ಲಿ ಕಾಯಲು ಒಳ್ಳೆಯ ಬೆಂಚುಗಳನ್ನು ನಿರ್ಮಿಸಿದ್ದಾರೆ. ಆದರೆ ಹೊಸ ನಿಲ್ದಾಣದ ನೆಲವಂತು ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಸೊಳ್ಳೆಗಳ ಕಾಟ ವಂತೂ ವರ್ಣಿಸಲಾಸಧ್ಯ. ಮೈ ಕೈಗೇ ಕಡಿದು ತಳಮಳಿಸುವಂತಾಗುತ್ತದೆ. ಅತಿ ಹೆಚ್ಚು ಜನ ಬಂದು ಕುಡ್ರಲು ಜಾಗ ಸಿಗದದ್ದರಂ  ತೂ ಆಗುವ ಸಂಕಟ ವಿವರಿಸಲು ಸಾಧ್ಯವಿಲ್ಲ. ಅನುಭವಿಸಿಯೇ ಕಾಣಬೇಕು.
ಕಪ್ಪು ಅಮೆರಿಕನ್ನರು, ನಮಗೆ ಬೇಕಾದ ಚಿಲ್ಲರೆ ಹಣವನ್ನು ತಕ್ಷಣ ಕೊಡುತ್ತಿದ್ದರು. ಅವರ ನಡವಳಿಕೆ ತೃಪ್ತಿದಾಯಕವಾಗಿತ್ತು.’ ಕ್ಯೂ ’ನಲ್ಲಿ ಜನ ತುಂಬಾಚೆನ್ನಾಗಿ ವರ್ತಿಸುತ್ತಿದ್ದರು. ಮತ್ತೆ ತಮ್ಮ-ತಮ್ಮ ಸಾಮಾನುಗಳನ್ನು ಅದು ಲ್ಯಾಟಿಸ್ ಮೇಲೆ ಹತ್ತಿರಕ್ಕೆ ಬರುವ ವರೆಗೂ ಸಂಯಮದಿಂದ ಕಾದು, ಪಡೆಯುತ್ತಿದ್ದರು. ಒಬ್ಬರ ಮೇಲೆ ಒಬ್ಬರು ಬೀಳುವುದು, ನಾನು ಮುಂದೆ ತಾನು ಮುಂದೆಯೆಂದು ಮಾತಿನ ಪ್ರಹಾರಮಾಡುವ ಕೆಟ್ಟ ಸಂಪ್ರದಾಯಕ್ಕೆ ಭಾರತೀಯರು, ’ ಪ್ರಪ್ರಥಮ ಬಹುಮಾನ,’ ವನ್ನು ಗಿಟ್ಟಿಸುತ್ತಾರೆ ! ವಿದೇಶಿಯರನ್ನು ಹೊಗಳುವ ಪರಿಪಾಠಬೆಳೆಸಿಕೊಂಡನೇನೋ, ಎಂದು ನನಗೆ ಒಮ್ಮೆ ಅನ್ನಿಸಿತು. ಆದರೆ, "ಗುಣಕ್ಕೆ ಮತ್ಸರವೇ" ? -'ನಮ್ಮಮ್ಮನ ಬುದ್ಧಿವಾಕ್ಯ', ತಕ್ಷಣ ನನ್ನ ನೆನಪಿಗೆ ಬಂತು !

Sunday, April 19, 2009

’ಆರೇಂಜ್ ಕೌಂಟಿ ’ಯಲ್ಲಿ ನಮ್ಮ ಪ್ರವಾಸದ ಕೊನೆಯದಿನಗಳನ್ನು ಕಳೆದ ಸುಂದರ ನೆನೆಪುಗಳು !

’ ಅವೆನ್ಯೂ ಆಫ್ ಆರ್ಟ್ಸ್ ’ ರಂಗಮಂದಿರಗಳ ಬಳಿ ಕಾರ್ ಪಾರ್ಕಿಂಗ್ ಗಾಗಿಯೇ ೫ ಮಡಿಯ ಕಟ್ಟಡಗಳನ್ನು ನಿರ್ಮಿಸಿದ್ದಾರೆ.
’ ಫಾಲಿಂಗ್ ಥಿಯೇಟರ್ ಸೆಂಟರ್ ’
೨೪ ಗಂಟೆಗಳಲ್ಲೂ ಸೇವೆ ಉಪಲಬ್ಧವಿರುವ, " ಸಿ. ವಿ.ಎಸ್. ಫಾರ್ಮಸಿ," ಕಾಸ್ಟಾಮೆಸದಲ್ಲಿ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿದೆ. ಇದರ ಶಾಖೆಗಳನ್ನು ( ಪ್ರಮುಖಶಾಖೆಯೆಲ್ಲಿದೆ ಗೊತ್ತಿಲ್ಲ ) ನಾವು, ಚಿಕಾಗೋ, ಸ್ಯಾನ್ ಫ್ರಾನ್ಸಿಸ್ಕೋ, ಬ್ಲೂಮಿಂಗ್ಟನ್, ಕೊಲಂಬಿಯಗಳಲ್ಲಿ ನೋಡಿದೆವು. ವಿಚಿತ್ರವೆಂದರೆ, ಅಮೆರಿಕನ್ನರಿಗೆ ಡಾಕ್ಟರ್ ಸೇವೆ ಸಿಗುವುದು ತೀರಾ ದುಬಾರಿವಿಶಯವೆಂದು ನಮಗೆ ತಿಳಿದವರೆಲ್ಲಾ ಹೇಳಿದರು. ತಾವೇ ಓದಿಕೊಂಡು ಮಾತ್ರೆಗಳನ್ನು ನುಂಗುತ್ತಾರಂತೆ. ಮೆಡಿಕಲ್ ಇನ್ಷೂರೆನ್ಸ್ ಇಲ್ಲದಿದ್ದರೆ ದೇವರೇ ಗತಿ. ಅದರಿಂದ ಹಲವಾರು ಭಾರತೀಯರು ಅವರ ತಂದೆತಾಯಿಯರನ್ನು ಕರೆಸಿಕೊಳ್ಳಲು ಹಿಂಜರಿಯುತ್ತಾರೆ. ಇಂತಹ "ಫಾರ್ಮಸಿ ಸ್ಟೋರ್,’ ಗಳಲ್ಲಿ ಹೋಗಿ ತಮಗೆ ಬೇಕಾದ ಔಷಧಿ ಸಾಮಗ್ರಿಗಳನ್ನು ಕೊಂಡು ತರುತ್ತಾರೆ. ಅಲ್ಲೇ ಒಬ್ಬ ಡಾಕ್ಟರನ್ನು ನಿಯುಕ್ತಿಮಾಡಿರುತ್ತಾರೆ. ಆತ ಅಲ್ಲಿನ ಔಷಧಿಗಳ ಗುಣಮಟ್ಟ ಹಾಗೂ ಅದರ ಉಪಯುಕ್ತತೆಯಬಗ್ಗೆ ನಮಗೆ ತಿಳಿಯಹೇಳುತ್ತಾನೆ. ಅದನ್ನೇ ಮಾನದಂಡಮಾಡಿಕೊಂಡು ನಾವು ಅಲ್ಲಿ ಸಿಗುವ ’ಡ್ರಗ್ಸ್ ’ ಖರೀದಿಸಬೇಕಷ್ಟೆ ! ನಮಗೆ ಗುಜರಾಥಿ ಭಾರತೀಯ ವೈದ್ಯರೊಬ್ಬರು ಸಿಕ್ಕಿದ್ದರು. ಅವರು ಹೇಳಿದಂತೆ ನಮಗೆ ಬೇಕಾಗಿದ್ದ ಮೊಣಕಾಲು ಪಟ್ಟಿ, ಕೈಪಟ್ಟಿ, ಸೊಂಟದ ಪಟ್ಟಿ, ಹಾಗೂ ಮೊಣಕೈ ಪಟ್ಟಿ, ಹಾಗೂ ಕೆಲವು ಮುಲಾಮುಗಳನ್ನು, ಮತ್ತು ಮಾತ್ರೆಗಳನ್ನು ಕೊಂಡೆವು..


’ಫೋಲಿಂಗ್ ಥಿಯೇಟರ್ ಸೆಂಟರ್, ’ಒಂದು ವಿಶಾಲವಾದ ಸುಸಜ್ಜಿತ ರಂಗಮಂದಿರ !


ಅಂದವಾದ ಗಿಡಗಳನ್ನು ಹದವಾಗಿ ಕತ್ತರಿಸಿ ಮಾಡಿದ ಸುಂದರ ವಿನ್ಯಾಸ....


’ ಸ್ಯಾಮ್ಯುಲ್ ಥಿಯೇಟರ್ ’ ಸಾಮಾನ್ಯದಿನಗಳಲ್ಲಿ ಈ ತಾಣ ಯಾವ ಹೆಚ್ಚಿನ ಗದ್ದಲ ಅಥವಾ ಗಲಾಟೆಗಳಿಲ್ಲದೆ, ಶಾಂತವಾಗಿರುತ್ತದೆ. ಆದರೆ ವಾರದ ಕೊನೆಯಲ್ಲಿ, ಮತ್ತು ಅಮೆರಿಕನ್ ಹಬ್ಬಗಳದಿನ, ಇಲ್ಲಿ ದೊಡ್ಡ ಜಾತ್ರೆಯಷ್ಟು ಜನರಿರುತ್ತಾರೆ. ಆದರೆ ನಮ್ಮ ಪಟ್ಟಣಗಳಂತೆ, ಅವ್ಯವಸ್ಥತೆ, ಅಧವಾ ಸ್ಟ್ಯಾಂಪೇಡ್ ಇಲ್ಲಿ ಯಾರಿಗೂ ಗೊತ್ತಿಲ್ಲ !


ಕಲಾರಂಗಭವನದ ಮುಂದಿನ ಕಟ್ಟೆಯಮೇಲೆ ....


ಕಲಾಮಂದಿರದ ಮೇಲ್ಛಾವಣಿಯ ಸುಂದರ ವಿನ್ಯಾಸವನ್ನು ಗಮನಿಸಿ...


ಸುಂದರ ಕಟ್ಟಡಗಳ ಸಮೂಹ....


ವೈರ್ ನಲ್ಲಿ ರಚಿಸಿದ ಸುಂದರ ವಿನ್ಯಾಸ...


ಹತ್ತಿರದಲ್ಲಿ ನೋಡಿದಾಗ...


ರಂಗಮಂದಿರದ ಪ್ರಮುಖ ದ್ವಾರದ ಮನಮೋಹಕ ವಿನ್ಯಾಸ...


ಸಂಪೂರ್ಣ ಗಾಜಿನಿಂದ ವಿನ್ಯಾಸಮಾಡಿದ ಕಾನ್ಸರ್ಟ್ ಹಾಲ್....


’ ಎಸ್. ಸಿ. ಆರ್. ’ ಗೆ ಹೋಗಲು ದಾರಿಸೂಚಿಸುವ ಸುಂದರ ವಿನ್ಯಾಸ....


ಮತ್ತೊಂದ ಕೋನದಿಂದ ವೀಕ್ಷಿಸಿದಾಗ ಕಾಣುವ ರೀತಿ...

ಆಫೀಸ್ ಕಟ್ಟಡಗಳು..


ಸುಂದರ ಟ್ಯುಲಿಪ್ ಗಳು...


ಬಹುಮಹಡಿ ಗಾಜಿನ ಕಟ್ಟಡ....


’ ಅವೆನ್ಯೂ ಆಫ್ ಆರ್ಟ್ಸ್ " ನ ಬಳಿಯ ಸುಂದರ 'ರಂಗಮಂದಿರಗಳು'  !


ಅಲ್ಲಿನ ಲಾಂಛನವೇನೋ ಎಂಬಂತೆ ತುಕ್ಕಿನ ಬಣ್ಣದ ಈ ಆಕೃತಿ ಇದೆ...


ಕಲಾಭವನದ ಹೊರಭಾಗದಲ್ಲಿ ನಾನುಕಂಡ ಅಮೆರಿಕನ್ ಮಾದರಿಯ, ಕಲಾಕೃತಿಗಳು...
ಕ್ಯಾಲಿಫೋರ್ನಿಯ, ನಮ್ಮ ಕನಸಿನ ತಾಣದಲ್ಲಿ ಕಳೆದ ಪ್ರತಿಕ್ಷಣಗಳೂ ನಮಗೆ ಮುದನೀಡಿದವು. ’ಕ್ಯಾಲಿಫೋರ್ನಿಯ ಗೋಲ್ಡ್ ರಶ್,” ”ವೈಲ್ಡ್ ವೆಸ್ಟ್ ’ನ ಭಾವನೆಗಳ ಹಲವಾರು ಅನಿಸಿಕೆಗಳನ್ನು ’ ಅತಿ-ವೇಗದ ಇಂಟರ್ನೆಟ್ ’ ನಲ್ಲಿ ಓದಲು ಅನುಕೂಲವಾಗಿತ್ತು. ನಾವಿನ್ನೂ ’ಕಾಸ್ಟಾಮೆಸ ’ನಗರದಲ್ಲಿದ್ದಾಗಲೇ ಒಂದು "ಜಬರ್ದಸ್ ಭೂಕಂಪ " ವನ್ನು ಅನುಭವಿಸಿದೆವು. ಭೂಕಂಪಗಳು ಕ್ಯಾಲಿಫೋರ್ನಿಯದ ಬೆನ್ನಿಗೆ ಅಂಟಿಕೊಂಡು ಬಂದಿವೆ ಎನ್ನುವ ಮಾತುಗಳನ್ನು ಓದಿದ್ದೆವು, ಕೇಳಿದ್ದೆವು. ಆದರೆ ಅದನ್ನು ನಾವೇ ಅನುಭವಿಸಿದ್ದು, ಒಂದ ಅವರ್ಣನೀಯ ಹಾಗೂ ಅಸಾಧಾರಣ ಅನುಭವ....!

ಅಲ್ಲಿನ ವಿಜ್ಞಾನಿಗಳು, ತಂತ್ರಜ್ಞರುಗಳು, ಭೂಕಂಪಕ್ಕೆ ಹೆದರುವುದಿಲ್ಲ. ಅದರಬದಲು, ಭೂಕಂಪಗಳನ್ನು ತಡೆಯುವ ಹಾಗೂ ಹಾನಿಗಳನ್ನು ನಿವಾರಿಸಲು, ಅಥವಾ ಹಾನಿಯನ್ನು ಕಡಿಮೆಮಾಡಲು ಪಡುತ್ತಿರುವಶ್ರಮ, ನಿಜಕ್ಕೂ ಅನುಕರಣೀಯ. ಅಲ್ಲಿನ ಜನರೇ ಹಾಗೆ. ಒಂದು ಆಘಾತ ಅಥವಾ ಒಂದು ದುರದೃಷ್ಟ-ಘಟನೆ, ಸಂಭವಿಸಿದಾಗ, ಅದನ್ನು ಮತ್ತೆ ಮರುಕಳಿಸದಂತೆ ಹೇಗೆ ಪರಿಸ್ತಿತಿಯನ್ನು ನಿಯಂತ್ರಿಸಬಹುದು, ಮತ್ತು ನ್ಯೂನಗೆಗಳನ್ನು ತಪ್ಪಿಸಿ ಸುಧಾರಿಸುವುದು ಹೇಗೆ, ಎನ್ನುವುದನ್ನು ಕಂಡುಹಿಡಿಯಲು ದಿನ-ರಾತ್ರಿ ಶ್ರಮಿಸಿತ್ತಾರೆ. ದೇವರನ್ನು ಬಿಟ್ಟರೆ ನಮ್ಮಂತಹ ಹುಲುಮಾನವರ ಕೈಲಿ ಸಾಧ್ಯವೇ ಎಂದು ಕೈಕಟ್ಟಿಕೊಂಡು ಕೂಡೃವರು ನಾವೇ ! ಆದರೆ, ಅಮೆರಿಕನ್ನರು ಹಾಗಲ್ಲ. ಅವರು, ಖಂಡಿತ ದೇವರ ಮೊರೆಯಂತೂ ಹೋಗುವುದಿಲ್ಲ. ದೇವರಮೇಲೆ ಎಲ್ಲಾ ಭಾರವನ್ನು ಬಿಡುವವರು ನಾವೇ -ಭಾರತೀಯರು ! ಇದೊಂದು, ಎಲ್ಲರೂ ಕಲಿಯಬೇಕಾದ ಪಾಠ ! ಹಾಗಂದ ಮಾತ್ರಕ್ಕೇ ಅಮೆರಿಕನ್ನರು ಮಾಡುವುದೆಲ್ಲಾ ಅನುಕರಣೀಯವೆಂದು ನಾನೆಲ್ಲಿ ಹೇಳಿದೆ ?


ನಾವಿದ್ದ ಕಾಲೋನಿಯ ಪರಿಸರದಲ್ಲಿ ಒಂದು ಕೃತಕ ಕಾಡನ್ನೇ ಸೊಗಸಾಗಿ ನಿರ್ಮಿಸಿದ್ದಾರೆ....


ಕಾಡು, ವನ, ನೀರು, ಬಂಡೆಗಳು, ಹುಲ್ಲು, ಹಸಿರು ಹೊನ್ನು ಎಲ್ಲವೂ ನಿಚ್ಚಳ, ಜನರೂ, ಹಾಗೂ ನಿಸರ್ಗ ಎರಡೂ ಎಡೆಬಿಡದ ಚಟುವಟಿಕೆಯ ಕೇಂದ್ರಗಳು, ಉತ್ಸಾಹದ ಚಿಲುಮೆಗಳು !


ಮೂರು ಈಚಲುಜಾತಿಯ- ಮರಗಳು... ಅಥವಾ ಪಾಮ್ ಅಂತೀರೋ ಏನೋ ಗೊತ್ತಿಲ್ಲ. ಹಾ ! ಈ ಮರಗಳಲ್ಲಿ ಮುಳ್ಳಿರುವುದಿಲ್ಲ....!


ಎಲ್ಲೆಲ್ಲಿ ನೋಡಿದರೂ ಸರೋವರಗಳು, ಬಾತ್ ಕೋಳಿಗಳು, ಆದರೆ, ಗುಬ್ಬಿ, ಕಾಗೆ, ಹದ್ದು, ಕೋಗಿಲೆ, ಮರಕುಟಕ ಅವೆಲ್ಲಾ ನಮ್ಮ ದೇಶದಲ್ಲಿ ಮಾತ್ರವೇನೋ...


ಸುಂದರವಾದ ಈಜುಕೊಳ...ಜನರೇ ಇಲ್ಲ... ರಶ್ ಎಲ್ಲಿ ಬಂತು ? ಈಜೇ ಬರದ ನಮಗೆ ಸ್ವಲ್ಪ ಬೇಸರವಾಯಿತು....


ಪ್ರಶಾಂತ ವಾತಾವರಣ, ಶಿವಮೊಗ್ಗದಲ್ಲೋ, ಅಥವಾ ಶೃಂಗೇರಿಯಲ್ಲೋ ಇದ್ದಹಾಗೆ ಭಾಸವಾಯಿತು....


’ಅವೆನ್ಯೂ ಆಫ್ ಆರ್ಟ್ಸ್” ನ ಮುಂದೆ... ವರ್ಷದ ಕೆಲವು ಸಮಯಗಳಲ್ಲಿ ಜಾತ್ರೆಯಷ್ಟು ಜನಜಂಗುಳಿ ಇಲ್ಲಿ ಸೇರುತ್ತದೆ. ನೃತ್ಯ, ನಾಟಕ, ಪ್ರಶಸ್ತಿಪ್ರದಾನ ಸಮಾರಂಭಗಳು, ಲೈವ್ ಶೋಗಳು, ಪಪೆಟ್ ಶೋಗಳು, ಮದುವೆಗಳು ಇದ್ದಾಗ...


ಸರೋಜ ಫೋಟೋ ತೆಗೆಯಲು ’ಯಾರೋ ದಾರಿಹೋಕ ಯುವತಿ ’ ಯನ್ನು ಕೇಳಿದಾಗ, ಆಕೆ, "ಒಹ್ ಶೂರ್ " "ಯು ವಾಂಟ್ ಪಿಕ್ಚರ್ಸ್ " ? ಅಂದವಳೆ, ಕ್ಯಾಮರಾದಲ್ಲಿ ಕ್ಲಿಕ್ಕಿಸಿದಳು. ’ನೋಡಿ ಇದು ಸರಿಯಾಗಿದೆಯೋ ಹೇಗೋ ನನಗೆ ತಿಳಿಯದು,’ ಅಂದಾಗ, ಆಕೆಯ ಸೌಜನ್ಯತೆಗೆ ಮನಸ್ಸಿನಲ್ಲೇ ವಂದಿಸಿದೆವು. ’ಥ್ಯಾಂಕ್ಯೂ ಮ್ಯಾಮ್, ’ ಎಂದಷ್ಟೆ ನಾವು ಹೇಳಿದ್ದು....( ನಾನು ಅವೆನ್ಯೂ ಆಫ್ ಆರ್ಟ್ಸ್ ನ ಭವನದ ಒಳಗೆ ಹೋಗಿದ್ದೆ.)


ಬೆಳಿಗ್ಯೆ ಮಧ್ಯಾನ್ಹ, ವಾಕಿಂಗ್ ಹೋದಾಗ, ನಾವು ಈ ಹೋಟೆಲ್ ಮುಂದೇ ಹೋಗುತ್ತಿದ್ದೆವು. ಅದಕ್ಕೊಂದು ಕಾಂಪೌಂಡೂ ಇರಲಿಲ್ಲ. ಯಾಕೆ ಬೇಕು, ಇಲ್ಲಿ ?


ಪಾಮ್ ಮರಗಳೇ ಎಲ್ಲೇಲ್ಲೂ, ಅದೂ ವೈವಿಧ್ಯಪೂರ್ಣ... ಅದೆಶ್ಟೋ ಬಗೆಯ ಪಾಮ್ ಗಳಿವೆಯೆಂದು ’ ನೆಟ್ ’ ನಲ್ಲಿ ಓದಿದಾಗ ಗೊತ್ತಾಯಿತು....

ಆಕಡೆ- ಈಕಡೆ.....


"೩೪೦೦ ಅವೆನ್ಯೂ ಆಫ್ ಆರ್ಟ್ಸ್ ನ, " ’ಹೌಸಿಂಗ್ ಕಾಂಪ್ಲೆಕ್ಸ್ ” ನ ಪ್ರಮುಖದ್ವಾರ....
.

ಕ್ಯಾಲಿಫೋರ್ನಿಯದ ದಷ್ಟ-ಪುಷ್ಟ ತರಕಾರಿಗಳು, ಹಣ್ಣುಹಂಪಲುಗಳು, ಮತ್ತು ಪರಿಮಳಯುಕ್ತ-ಹೂಗಳ, ಸೊಬಗೇ ಬೇರೆ...